ಮುಗ ರೇಷ್ಮೆ ಅಸ್ಸಾಮ್ ರಾಜ್ಯಕ್ಕೆ ಸೀಮಿತವಾಗಿ ಬೆಳೆಯುವ ಕಾಡು ರೇಷ್ಮೆಯ ಒಂದು ವಿಧ.ಇದನ್ನು ಭಾರತ ಭೌಗೋಳಿಕ ಚಿಹ್ನೆಯನ್ನಾಗಿ ಅಂಗೀಕರಿಸಲಾಗಿದೆ .ಇದರ ಲಾರ್ವಗಳು ಸುವಾಸನಯುಕ್ತ ಸೋಮ್ ಮತ್ತು ಸ್ವಾಲು ಎಲೆಗಳನ್ನು ಭಕ್ಷಿಸುತ್ತವೆ.ಈ ರೇಷ್ಮೆಗೆ ನೈಸರ್ಗಿಕವಾದ ತಿಳಿಹಳದಿ ಬಣ್ಣ ಮತ್ತು ನುಣುಪಾದ ಹೊಳಪು ಇದೆ.ಇದು ದೀರ್ಘಕಾಲ ಬಾಳಿಕೆ ಬರುತ್ತದೆ.ಇದು ಹಿಂದಿನ ಕಾಲದಲ್ಲಿ ಅರಸು ಮನೆತನದವರ ಉಪಯೋಗಕ್ಕಾಗಿಯೇ ಕಾದಿರಿಸಲ್ಪಡುತ್ತಿತ್ತು .ಇದನ್ನು ಈಗ ಉಳಿದ ರೇಷ್ಮೆಯಂತೆಯೇ ಸೀರೆ ಮತ್ತು ಶಾಲುಗಳ ಉತ್ಪಾದನೆಯಲ್ಲಿ ಉಪಯೋಗಿಸುತ್ತಾರೆ. ರೇಷ್ಮೆ ಕೃಷಿ ಅಸ್ಸಾಂ ರಾಜ್ಯದಲ್ಲಿ ಅನಾದಿ ಕಾಲದಿಂದಲೂ ಇದ್ದರೂ ೧೨೨೮ರಿಂದ ೧೮೨೬ರ ವರೆಗೆ ಈ ಪ್ರದೇಶವನ್ನು ಆಳಿದ ಅಹೋಮ್ ರಾಜಮನೆತದವರಿಂದ ವಿಶೇಷ ಪ್ರೋತ್ಸಾಹವನ್ನು ಪಡೆಯಿತು.ಇವರು ಮುಗ ರೇಷ್ಮೆಯನ್ನು ರಾಜ ಉಡುಪುಗಳಿಗೆ ಅಂತೆಯೇ ವಿದೇಶಕ್ಕೆ ರಫ್ತು ಮಾಡಲು ಉಪಯೋಗಿಸಿದರು. == ಉಲ್ಲೇಖಗಳು ==